ಪರ್‌ಮಾನೊಸಲ್ಫ್ಯೂರಿಕ್ ಆಮ್ಲವು (H2SO5) ಒಂದು ಆಮ್ಲ. ಈ ಆಮ್ಲವನ್ನು ಪತ್ತೆಹಚ್ಚಿದವನ ಗೌರವಾರ್ಥ ಇದಕ್ಕೆ ಕೇರೋ (1898) ಆಮ್ಲವೆಂದು ಹೆಸರಿಸಿದ್ದಾರೆ. == ತಯಾರಿಕೆ == ಪೊಟ್ಯಾಸಿಯಂ ಪರ್‌ಸಲ್ಫೇಟನ್ನು 40% ಸಲ್ಫ್ಯೂರಿಕ್ ಆಮ್ಲದೊಂದಿಗೆ ಅರೆದು ಒಂದು ಗಂಟೆಯ ಕಾಲ ಶೈತ್ಯ ಮಿಶ್ರಣದಲ್ಲಿಟ್ಟು ಅನಂತರ ಕ್ರಿಯಾಮಿಶ್ರಣವನ್ನು ಬರ್ಫದ ಮೇಲೆ ಸುರಿದರೆ ಕೇರೋ ಆಮ್ಲ ರೂಪುಗೊಳ್ಳವುದು. ಕ್ಲೋರೋಸಲ್ಫಾನಿಕ್ ಆಮ್ಲ ಮತ್ತು ಹೈಡ್ರೊಜನ್ ಪೆರಾಕ್ಸೈಡುಗಳ ವರ್ತನೆಯಿಂದ ಇದನ್ನು ಸಂಶ್ಲೇಷಿಸಬಹುದು. H2O2 + ClSO2OH ⇌ H2SO5 + == ಗುಣಗಳು == ಪರ್‌ಮಾನೋಸಲ್ಫ್ಯೂರಿಕ್ ಆಮ್ಲ ಸಹ ಹರಳು ರೂಪದ ಬಿಳಿಯ ಘನ. ಇದರ ದ್ರವನಬಿಂದು 420 ಸೆಂ. ಈ ಘನ ಸಾಕಷ್ಟು ಸ್ಥಿರವಾಗಿರುವುದು. ಇದು ಪರ್‌ಡೈಸಲ್ಫ್ಯೂರಿಕ್ ಆಮ್ಲಕ್ಕಿಂತ ಪ್ರಬಲ ಉತ್ಕರ್ಷಣಕಾರಿ. ಪೊಟ್ಯಾಸಿಯಂ ಅಯೊಡೈಡಿನ ದ್ರಾವಣದಿಂದ ತತ್‌ಕ್ಷಣ ಅಯೊಡೀನನ್ನು ಬಿಡುಗಡೆ ಮಾಡುವುದು ಇದಕ್ಕೆ ನಿದರ್ಶನ. ಇದರ ಸಂಪರ್ಕ ಪಡೆದ ಹತ್ತಿ ಮತ್ತು ಉಣ್ಣೆಗಳು ಕೂಡಲೇ ಕಾರ್ಬನೀಕರಿಸುತ್ತವೆ. ಅನಿಲೀನು ನೈಟ್ರೋಬೆನ್ಸೀನಾಗುವುದು. == ಉಲ್ಲೇಖಗಳು ==